Oops! Sorry!!


This site doesn't support Internet Explorer. Please use a modern browser like Chrome, Firefox or Edge.

ನಮ್ಮ ಬಗ್ಗೆ

ಗೌಡ ಜನಾಂಗ “ಗೌಡ" ಶಬ್ದವು ಅತೀ ಪ್ರಾಚೀನವಾದದ್ದು ಗೌಡ ಅಂದರೆ *ಯಜಮಾನ' ಎಂದು ಅರ್ಥವಾಗುತ್ತದೆ. * ಗೌಡರು ಅಂದರೆ.ಭೂಮಿಗೆ ಒಡೆಯರು, ಊರಿಗೆ ಮುಖ್ಯಸ್ಥರು ಎಂಬ ವಿವರಣೆಯೂ ಇದೆ. ಪ್ರಾಚೀನ ಗ್ರಂಥಗಳಲ್ಲಿಯೂ, ಶಾಸನಗಳಲ್ಲಿಯೂ ಗಾವುಂಡ,ಗವೂಂಡ, ಗವೂಂಡಿ, ಗೌಡಿ, ಗವೂಂಡರ್‌ ಎಂಬ ಪದಗಳು ನೋಡಲು ಸಿಕ್ಕುತ್ತವೆ.ಪುರಾತನ ಗದ್ಯ ಸಾಹಿತ್ಯದಲ್ಲಿ ಅಂಗ, ವಂಗ, ಕಳಿಂಗ ಮುಂತಾದ... ಐವತ್ತಾರು ದೇಶಗಳನ್ನು ಹೆಸರಿಸುವಾಗ ಅದರಲ್ಲಿಗೌಡದೇಶವೂ ಇರುವುದು ಕಂಡು ಬರುತ್ತದೆ. ಇದರಿಂದ. ಗೌಡ ರಾಜ್ಯವೊಂದು ಇತ್ತಂದು ತಿಳಿದುಬರುತ್ತದೆ. ಚೇರ ಜನಾಂಗಬಿಹಾರದಿಂದ ಅಸ್ಸಾಂ ವರೆಗೆ ಪ್ರಬಲರಾಗಿದ್ದರು. ಅವರು ಗೌಡ ಸಂಸ್ಕತಿಯ ಪರಿಪೋಷಕರಾಗಿದ್ದರೆಂದು ಇತಿಹಾಸದಿಂದ ತಿಳಿಯುತ್ತದೆ.ಉತ್ತರದಿಂದ ದಕ್ಷಿಣಕ್ಕೆ ವಲಸೆ ಬಂದ ಜೀರರು ತಮ್ಮ ಸಂಸ್ಕೃತಿಯ ಪ್ರತೀಕವಾಗಿ * ಗೌಡ ` ಎಂಬ ಹೆಸರಿನಿಂದಲೇ ಇಂದಿಗೂಉಳಿದುಕೊಂಡು ಬಂದಿದ್ದಾರೆ.ಗೌಡರ ಆಳ್ವಿಕೆಯು ಚೇರರ ಕಾಲದಲ್ಲಿ ಪ್ರಾರಂಭವಾಗಿ ಗಂಗರಸರ ಕಾಲಕ್ಕೆ ದಕ್ಷಿಣ ಮೈಸೂರಿನಾದ್ಯಂತ ವಿಸ್ತರಿಸಿದಂತ ಕಾಣುತ್ತದೆ.ಇನ್ನೊಂದು ತರ್ಕದ ಪ್ರಕಾರ , ಗೌಡ ಜನಾಂಗವು ಮೈಸೂರು, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ನೀಲಗಿರಿ,ಕೊಯಮುತ್ತೂರುನಲ್ಲಿ ನೆಲೆಸುವ ಮೊದಲು ಬೇರೆ: ಕಡೆಯಿಂದ ಬಂದಿರಬಹುದೆಂಬ ನಂಬಿಕೆಯಿದೆ. ಇದಕ್ಕಿಂತ ಮೊದಲೇ ಕ್ರಿಶ. ೧೩೦೦.ರಿಂದ ೧೬೦೦ರ ವರೆಗೆ ವಿಜಯನಗರ ( ಹಕ್ಕೆ ಬುಕ್ಕರ ರಾಜ್ಯ ಸಾಮ್ರಾಜ್ಯದಲ್ಲಿ ನೆಲೆಸಿದ್ದರು. ಅಲ್ಲಿ ಮುಂದೆ ತಾಳಿಕೋಟೆ ಯುದ್ಧದಲ್ಲಿವಿಜಯನಗರ ಅರಸರು ಬಹಮನೀ ಸುಲ್ವಾನರಿಂದ ಸೋಲಿಸಲ್ಪಡುವ ವರೆಗೆ ಅಲ್ಲೇ ಇದ್ದರು.ಇದೇ ಸಮಯದಲ್ಲಿ ಈ ಗೌಡರಿಗೆ ವಿದ್ಯಾರಣ್ಯರ ಮೂಲಕ ಶೃಂಗೇರಿ ಮಠದ ಸಂಪರ್ಕವಾಯಿತು. ಹಾಗಾಗಿ ಅಲ್ಲಿಂದಮುಂದೆ ಇವರು ವಿಜಯನಗರದ ರಾಜರ ಮನೆದೇವರಾದ ವಂಕಟರಮಣ ಸ್ವಾಮಿಯನ್ನು ಪೂಜಿಸಿ ಸ್ವಾಮಿಯ ಮುಡಿವನ್ನು ಮನೆಗಳಲ್ಲಿತಂದಿಟ್ಟು ಹರಿಸೇವೆಯನ್ನು ಮಾಡಲು ಪ್ರಾರಂಭಿಸಿದರು. ಎಂದು ತಿಳಿಯುತ್ತದೆ. ಹೀಗೆ ಇವರ ಕುಲದೇವರು. ವೆಂಕಟರಮಣಸ್ವಾಮಿಯಾಗಿರುವುದು ವಿಜಯನಗರದಲ್ಲಿದ್ದ ಇನ್ನೊಂದು ಕುರುಹಾಗಿದೆ. ಶೃಂಗೇರಿ ಮಠದ ಸಂಪರ್ಕ ಪಡೆದುದರಿಂದ ತಮ್ಮ ಜಾತಿಪದ್ದತಿಗಳ ಕಟ್ಟುಪಾಡುಗಳನ್ನು ಶೃಂಗೇರಿ ಜಗದ್ಗುರುಗಳ ನಿರ್ದೇಶನದ ಮೇರೆಗೆ ರೂಪಿಸಿದರೆನ್ನಬಹುದು. ಅದೇ ರೀಶಿ ಶೃಂಗೇರಿಯಸುಬ್ಬಮ್ಮ (ಶಾರದಾಂಬೆ) ದೇವರಿಗೆ ಮದುವೆಯಲ್ಲಿ ಹರಕೆ ಹಣ ಕಟ್ಟುವ ಪದ್ಧತಿ ಪ್ರಾರಂಭವಾಯಿತನ್ನಬಹುದು.ತಾಳಿಕೋಟೆ ಯುದ್ಧದ ನಂತರ ಮುಸಲ್ಮಾನರ ಭಯದಿಂದ ಗೌಡರು, ವಿಜಯನಗರದ ರಾಜರ ಸಲಹೆಯ ಮೇರೆಗೆ ಈಗಿನಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ಇಕ್ಕೇರಿ ರಾಜ್ಯಕ್ಕೆ ಬಂದು ನೆಲೆಸಿದರು. ಆದರೆ ಅಲ್ಲಿಯ ಬಲಾಢ್ಯ ಲಿಂಗಾಯತ ಜನಾಂಗಇವರನ್ನು ಲಿಂಗಾಯತರಾಗದೇಕೆಂದು ಬಲಾತ್ಮರಿಸಿದಾಗ ಇಕ್ಕೇರಿ ನಾಯಕರ ನಿರ್ದೇಶನದ ಮೇರೆಗೆ ಹಾಸನ ಜಿಲ್ಲೆಯ ಐಗೂರು ಸೀಮಗೆಬಂದು ನೆಲೆಸಿದರು.ವಿಜಯನಗರ ರಾಜಪರಂಪರೆಯಲ್ಲಿ ' ತಾಳುಪ' ಅಥವಾ ತುಳು ವಂಶದವರು ಸ್ವಲ್ಪಕಾಲ ರಾಜ್ಯವಾಳಿದರೆಂದೂ ಅವರು ಗೌಡ.ಜನಾಂಗದವರೆಂಬ ಭಾವನೆಯಿದೆ.ಕ್ರಿಶ, 1207ರ ಸುಮಾರಿಗೆ ಗೌಡ ಜನರು. * ಗೌಡದೇಶ'ದವರಾಗಿದ್ದರು. ಈ ಗೌಡದೇಶವೆಂಬುದು ಬಂಗಾಳದಲ್ಲಿತ್ತೆಂದು " ಆಲ್ಲಾ ಹೋ-ಆಕ್ಟರ್‌' ಎಂಬ ಪುಸ್ತಕದಿಂದ ತಿಂದುಬರುತ್ತದೆಂದು ಇತಿಹಾಸಕಾರರು ಹೇಳುತ್ತಾರೆ. ಗೂಡ್‌ ಅಂದರೆಜಿಲ್ಲ, ಗೂಡ್‌ ದೇಶ ಗೌಡ ದೇಶವಾಯಿತೆಂದು ಬಲ್ಲವರು ಹೇಳುತ್ತಾರೆ. "ಗೌಡ ಬಂಗಾಳಿ'ಯೆಂಬ ಜನರು ಈಗಲೂ ಬಂಗಾಳದಲ್ಲಿಇರುವುದಾಗಿ ತಿಳಿದುಬರುತ್ತದೆ. ಕ್ರಮೇಣ ಅಲ್ಲಿಂದ ದಕ್ಷಿಣಕ್ಕೆ ಬಂದಿರಬಹುದೆಂದು ಹಲವು ಮಂದಿ ಅಭಿಪ್ರಾಯ ಪಡುತ್ತಾರೆ.ಹಾಲು ಒಕ್ಕಲು ಮಕ್ಕಳು ಯಾನೆ ಗೌಡರು.ಹಾಲು ಒಕ್ಕಲು ಮಕ್ಕಳು ಯಾನೆ ಗೌಡರು ಕರ್ಣಾಟಕದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಗಳಲ್ಲಿ ಹಾಗೂ ಕೇರಳದಕಾಸರಗೋಡು ತಾಲೂಕುಗಳಲ್ಲಿಯೂ ಮತ್ತು ಒರಿಸ್ಸಾದ ಗಂಜಾಂ ಜಿಲ್ಲೆಯಲ್ಲೂ ಇದ್ದಾರೆ. ಇವರ ಪ್ರಕಾರ ಒರಿಸ್ಸಾದ. ಗಂಜಾಂ ಜಿಲ್ಲೆಯಲ್ಲಿರುವ ಗೌಡ ಜನಾಂಗದವರು ಹಿಂದೆ ಪಶುಪಾಲನೆಯಲ್ಲಿ ಬಹಳ ನಿಮೂರಾಗಿದ್ದು ತುಂಬಾ ಪಶುಗಳನ್ನು ಸಾಕಿ ಗೋವಿನ ಉತ್ಪನ್ನದಿಂದ ದೊಡ್ಡ ಹಣವಂತರಾಗಿದ್ದರು. ಇದೇ.ರೀತಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗಿನ ಗೌಡರು ಪಶುಸಂಗೋಪನೆಯಲ್ಲಿ ನಿಪುಣರಾಗಿದ್ದರು ಎಂದು ಹೇಳುತಾರೆ. ಆದ್ದರಿಂದ ಇವರಿಗೆ ಹಾಲು ಒಕ್ಕಲು ಮಕ್ಕಳು ಎಂಬುದಾಗಿ ಜಾತಿ ಹೆಸರಾಯಿತು. “ಗೌಡರು ಅಥವಾ ಗೌಡು ಒಂದು ದೊಡ್ಡ ಜಾತಿಯ ಕನ್ನಡ ನಾಡಿನ ವ್ಯವಸಾಯಗಾರರು ಹಾಗೂ ಪಶು ಸಂಗೋಪಕರು ಗೌಡರು ಕನ್ನಡಿಗರು. ಗೌಡು ಒರಿಯ ಭಾಷೆಯನ್ನಾಡುವವರು. ಎನಡೂ ಹೆಸರುಗಳು ಶಬ್ದಗಳ ಅರ್ಥದ ಪ್ರಕಾರ ಒಂದೇ ಆಗಿದೆ. ಸಾಮಾನ್ಯವಾಗಿ ಇವು. ಗೋ - ಹನು: ಎಂಬ ಪದದಿಂದ ಬಂದಧಾಗಿ ಶ್ರೀ ಯಸ್‌. ಸ್ಪೂವರ್ಟ್‌ ಹೇಳುತ್ತಾರೆ. ಈ ಗೌಡರನ್ನುಹಾಲು ಒಕ್ಕಲು ಮಕ್ಕಳು” ಎಂಬುದಾಗಿ ಕರೆಯುತಾರೆದಕ್ಷಣ ಕನ್ನಡದ ಗೌಡರುದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳಲ್ಲಿ ಗೌಡ ಜನಾಂಗದವರು ಹಾಗಿವಾಸಿಸುತ್ತಾರೆ. ದಶಃಜ್ಲಗೆ ಹೊಂದಿಕೊಂಡಂತೆ ಇರುವ ಕಾಸರಗೋಡು ಜಜ್ಜೆಯ ಕೆಲವು ಭಾಗದಲ್ಲೂ ಕೂಡಾ ಗೌಡರು ವಾಸಿಸುತ್ತಿದ್ದರೆ.ಆಡುಭಾಷೆಯ ಆಧಾರದ. ಮೇಲೆ. ಈ ಭಾಗದ ಗೌಡರನ್ನು ಅರಭಾಷೆ. ಗೌಡರಂದೂ, ತುಳುಗೌಡರಂದೂವಿಭಜಬಹುದಾಗಿದೆ. ಡಾ. ಪುರುಷೋತ್ತಮ ಬೀಮಲೆ ಇವರು ಸುಳ್ಳ ಪರಿಸರದ ಗೌಡರ ಬಗ್ಗೆ ಅಧ್ಯಯನ ಮಾಡಿ ಬರೆದ ಪ್ಬಂರದದ ಮೂಲಕ ಕರಾವಳಿ ಕರ್ಣಾಟಕದ ಗೌಡರ ಮೂಲದ ಬಗ್ಗೆ ಕೆಲವೊಂದು ಮಾಹಿತಿ ಲಭ್ಯವಾಗುತ್ತವೆ. ದಕ್ಷಿಣ ಕನ್ನಡದ ಗೌಡರು ಈ ಜಲ್ಲೆಯ ಮೂಲ ನಿವಾಸಿಳಲ್ಲ. ಅವರು ಈ ಪ್ರದೇಶಗಳಿಗೆ ಹಾಸನ ಜಲ್ಲೆಯ ಸಕಲೇಶಪುರ ಸಮೀಪದ ಐಗೂರು ಪರಿಸರದಿಂದ ವಲಸೆ ಬಂದಿರಬಹುದಾಗಿ ತಿಳಿದು ಬರುತ್ತದೆ. ಈ ವಲಸೆಯು ನಿರ್ದಿಷ್ಟವಾಗಿ ಯಾವ ಕಾಲದಲ್ಲಿ ನಡೆಯಿತೆಂದು ತಿಳಿಯದಿದ್ದರೂ ಕೆಲವೊಂದು ಸಾಂಧರ್ಭಿಕ ಆಧಾರದ ಪ್ರಕಾರ ಈ ವಲಸೆಯು 15-16ನೇ ಶತಮಾನದಲ್ಲಿ ನಡೆಯಿತು.ಎಂದು ಹೇಳಬಹುದಾಗಿದೆ. ಐಗೂರು ಪರಿಸರದಲ್ಲಿ ಹೇಮಾವತಿ ನದಿ ದಂಡೆಯಲ್ಲಿ ಕೆಂಚಾಂಬಕೆ ದೇವಸ್ಥಾನವೊಂದಿದೆ. ಇದನ್ನು 1604ರಲ್ಲಿ ಕಟ್ಟಿಸಲಾಯಿತು. ಇದು ಐಗೂರು ಪರಿಸರದ ಗೌಡರಿಗೆ ಮನೆ ದೈವವೂ ಹೌದು. ಸುಳ್ಳ ಪರಿಸರದ ಗೌಡರು ಈಗಲೂ-ಕಂಚಾಂಯೆಗೆ ಹರಕ ಒಪ್ಪಿಸುತ್ತಾರೆ. ಇದು ಗೌಡರ ವಲಸಿಗ ಒಂದು ಪುರಾವ ಎನ್ನಬಹುದಾಗಿದೆ. ಎರಡನೆಯದಾಗಿ ಸಕಲೇಶಪುರ ತಾಲೂಕಿನಲ್ಲಿರುವ 'ಒಣಗೂರು ಸುಬ್ಬಮ್ಮ ದೈವ”. ಇದು 15-16 ನೇ ಶತಮಾನದಲ್ಲಿಪ್ರಶ್ಯಾತಿಗೆ ಬಂದಿತ್ತು. ಸುಳ್ಯ ಭಾಗದ ಗೌಡರು ಮದುವೆಯ ಸಂದರ್ಭದಲ್ಲಿ ಒಣಗೂರು ಸುಬ್ಬಮ್ಮನಿಗೆ ಕಾಳುಮೆಣಸಿನ ಹರಕೆಯನ್ನುತೆಗದರಿಸುತ್ತಾರೆ. ಇದು ಹಿಂದಿನ ದೈವ ಸಂಬಂಧವನ್ನು ಸಾಬೀತುಪಡಿಸುವ. ಇನ್ನೊಂದು ವಿಷಯವಾಗಿದೆ. ಇವುಗಳನ್ನುಆಧಾರವಾಗಿಟ್ಟುಕೊಂಡು, ದಕ್ಷಿಣ: ಕನ್ನಡ ಜಿಲ್ಲೆಗೆ ಗೌಡರು ಹಾಸನ ಜಿಲ್ಲೆಯ ಐಗೂರು ಪರಿಸರದಿಂದ ವಲಸೆ ಬಂದರೆಂದುತಿಳಿದುಕೊಳ್ಳಬಹುದಾಗಿದೆ.ಆದರೆ ಈ ವಲಸೆಗೆ ನಿರ್ದಿಷ್ಟ ಕಾರಣ ಹಾಗೂ ಅಖತ ಆಧಾರಗಳಿಲ್ಲ. ಸುಳ್ಯ ಪರಿಸರದಲ್ಲಿ ಗೌಡರು ನಿರೂಪಿಸುವ "ಕೆಂಡದಮಳೆಯು' ಬಹುಶ: ಹಾಸನ ಜಿಲ್ಲೆಯಲ್ಲಿ ಹೇಮಾವತಿ ನದಿಯು ಬತ್ತಿ ಹೋಗಿ, ಐಗೂರು ಪರಿಸರದಲ್ಲಿ ಬಂದಿರಬಹುದಾದ ಭೀಕರ.ಬರಗಾಲವನ್ನು ಸೂಚಿಸುತ್ತದೆ. ಅದರಿಂದಾಗಿ ವಲಸೆ ಹೋಗಿರಲೂಬಹುದು. ಅಲ್ಲದೆ ಅಲ್ಲಿಯ ನಾಯಕನಾದ ರಂಗಪ್ಪ ನಾಯಕನುಕೊಡುತ್ತಿರುವ ಉಪಟಳದಿಂದ ಪಾರಾಗಲು ಗೌಡರು ಆ ಕಡೆಯಿಂದ ಫಟ್ಟದ ಕಳಗೆ ವಲಸೆ ಬಂದಿರಲೂ ಬಹುದು.ಹೀಗೆ ವಲಸೆ ಬರುವಾಗ ಎರಡು ಪ್ರತ್ಯೇಕ ಹಾದಿಗಳಲ್ಲಿ ಬಂದಿರುವರೆಂದು ಕಂಡುಬರುತ್ತದೆ. ಒಂದು ವಲಸೆಯು ಐಗೂರುಪರಿಸರದಿಂದ ಒಣಗೂರಿಗಾಗಿ , ಬಿಸಿಲೆ ಫಾಟಿಯ ಮೂಲಕ ಕುಳ್ಳಾಂದ - ಸುಬ್ರಮಣ್ಯ ಕ್ಕೆ ಬಂದು ಕುಮಾರಧಾರಾ ನದಿಯ ದಂಡಯಮೂಲಕ ಮುಂದುವರೆದಿದೆ. ಇನ್ನೊಂದು ಪಂಗಡವು ಐಗೂರು ಪರಿಸರದಿಂದ ಓಣಗೂರಿಗಾಗಿ ಸಕಲೇಶಪುರದ ಮೂಲಕ ಮೂಡಿಗರಗಮುಂದುವರಿದು ಜಾರ್ಮಾಡಿ ಘಾಟಿ ಮೂಲಕ ಬೆಳ್ತಂಗಡಿ ಪರಿಸರಕ್ಕೆ ಬಂದು ನೇತ್ರಾವತಿ ನದಿದಂಡೆಯಲ್ಲಿ ಮುಂದುವರೆಯಿತು. ಈಪ್ರಸರಣಗಳ ಕಥೆಯು ಏನೆಕಲ್ಲಿನ ಬಜ್ಜಾನಾಯಕನ ಪಾಡ್ದನದಲ್ಲಿ ಸುಂದರವಾಗಿ ನಿರೂಪಿತವಾಗಿದೆ. ಹಾಗೆಯೇ ಶಿರಾಡಿ ಭೂತದಪಾಡ್ದನದ ಪ್ರಸಂಗವು ಜಾರ್ಮಾಡಿ ಪರಿಸರದ ಮೂಲಕ ಕರಾವಳಿಗೆ ಇಳಿದು ಬಂದ ಗೌಡರುಗಳ ಕಥೆಯೇ ಆಗಿದೆ.ದಕ್ಷಿಣ ಕನ್ನಡದಲ್ಲಿ ದೈವದ ಕೋಲ ಕಟ್ಟುವಾಗ ದೈವ ಮೊದಲು “ ಎಂಕುಲು ಉತ್ತರೊ ಸೀಮೆಡ್ತ್‌ ಫಟ್ಟ ಜತ್ತ್‌ ಬತ್ತ್‌ನಗಳ್‌”ಎಂಬ ಕಟ್ಟು ಅಥವಾ ಪಾಡ್ದನ ಹೇಳುತ್ತದೆಯಂತೆ. (ನಾವು ಉತ್ತರದ ಫಟ್ಟದ ಸೀಮೆಯಿಂದ ಇಳಿದು ಬಂದವರು)ಹೀಗೆ ಫಟ್ಟದ ಕೆಳಗೆ ಇಳಿದು ಬಂದ ಗೌಡರುಗಳಲ್ಲಿ ಕುಮಾರಧಾರ ನದಿ ದಂಡೆಯ ಮೂಲಕ. ಸಾಗಿ ಬಂದವರುಕೂಜುಗೋಡಿನ ಸುತ್ತಮುತ್ತ ನೆಲೆಸಿದರು. ಇದು ಕೂಜುಗೋಡು ಕಟ್ಟೆಮನೆ ಎಂದು ಪ್ರಸಿದ್ಧವಾಯಿತು. ನೇತ್ರಾವತಿ ನದಿದಡದಲ್ಲಿ ತೆರಳಿದಇನ್ನೊಂದು ಪಂಗಡದ ಗೌಡರು ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಾಸರಗೋಡು ಕಡೆ ಹೊಗಿ ನೆಲೆಸಿದರು. ಪುತ್ತೂರು ಪರಿಸರದಗೌಡರು ಬಲ್ನಾಡು ಕಟ್ಟಿಮನೆಯನ್ನು ಆಡಳಿತ ಸ್ಥಾನವನ್ನಾಗಿ ಸ್ಥಾಪಿಸಿದರು. ಮೊದಲಿಗೆ ಕರಾವಳಿ ಭಾಗದ ಇತರ ವರ್ಗಗಳೊಂದಿಗೆಒಕ್ಕಲಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಇವರು ಕ್ರಮೇಣ ಸ್ಪಂತ ಕೃಷಿಭೂಮಿ ಹೊಂದಿ ವ್ಯವಸಾಯ ಪ್ರಾರಂಭಿಸಿರಬೇಕು.ಗೌಡರ ಸಾಯತ್ರಿಕ ಚೌಕಟ್ಟಿನಲ್ಲಿ ಬಹಳಷ್ಟು ಗೊಂದಲಗಳು ಕಾಣುತ್ತವೆ. ಈ ಪರಿಸರದ ಗೌಡರಿಗೆ ಗುರುಮಠ ಶೃಂಗೇರಿ,ಜಾತಿಮಠ ಆದಿಚುಂಚನಗಿರಿ. ಕುಲದೇವರು ತಿರುಪತಿ ವೆಂಕಟರಮಣ. ಆದಿಚುಂಚನಗಿರಿಯ ಆರಾಧ್ಯದೈವ ಕಾಲಭೈರವ. ಆಡುಭಾಷೆ.ತುಳು ಮತ್ತು ಅರೆಭಾಷೆ. ಭಾಷೆ ಎರಡಾದರೂ ಮೂಲ ಒಂದೇ. ತುಳುನಾಡಿನ ಪದ್ದತಿಯಂತೆ ಭೂತಾರಾಧನಾ ಕ್ರಮ. ಸಾಂಸತ್ರಿವಾಗಿತುಳುನಾಡಿನ ಸಂಸ್ಕತ್ವಿಯ ಅವಲಂಬನೆ. ಗೌಡ ಸಮುದಾಯವು ಪಿತೃಪ್ರಧಾನ ಕುಟುಂಬ ವ್ಯವಸ್ಥೆಗೆ ಸೇರಿದೆ. ಇಲ್ಲಿ ಬಳಿ ಮತ್ತು ಆಸ್ತಿ ಅಧಿಕಾರವು ತಂದೆಯಿಂದ ಹಿರಿಯಮಗನಿಗೆ ಇಳಿದು ಬರುತ್ತಿತ್ತು. ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಆಸ್ತಿಯ ಅಧಿಕಾರ ಮತ್ತು ನ್ಯಾಯಾಧಿಕಾರವು ವಯಸ್ಸಿನಲ್ಲಿಹಿರಿಯನಾದವನಿಗೆ ಸೇರುತ್ತಿತ್ತು. ಅವನನ್ನು ಪಟ್ಟೇದಾರ ಎನ್ನುವರು. ಪಟ್ಟೇದಾರ ಇರುವ ಮನೆಯೇ ಕುಟುಂಬದ ಮೂಲಮನೆ. ಈಗಎಲ್ಲಾ ಕುಟುಂಬಗಳೂ ವಿಭಕ್ತಕುಟುಂಬ ವ್ಯವಸ್ಥೆಗೆ ಒಳಪಟ್ಟಿರುವುದರಿಂದ ಈ ಪದ್ಧತಿಯೇ ಕಣ್ಮರೆಯಾಗುವ ಹಂತಕ್ಕೆ ಬಂದಿದೆ.* ಕುಟುಂಬ' ಎಂಬುದು ಒಂದು ಪ್ರಾಥಮಿಕ ಘಟಕ. ಹಲವು ಕುಟುಂಬಗಳು ಸೇರಿ ಒಂದು " ಊರು'. ಊರಿಗೊಬ್ಬ"ಊರುಗೌಡ'. ಊರುಗೌಡನಿಗೊಬ್ಬ " ಒತ್ತುಗೌಡ'. ನಾಲ್ಕರಿಂದ ಆರು ಊರುಗೌಡರಿಗೆ ಒಬ್ಬ " ಮಾಗಣೆ ಗೌಡ'. ಇಂತಹ ಒಂಬತ್ತುಮಾಗಣೆಗಳಿಗೆ ಒಂದು "ಕಟ್ಟೆಮನೆ '. ಕಟ್ಟೆಮನೆ ಗೌಡರ ಸರ್ವೋಚ್ಚ ಸ್ಥಾನ. ಕರಾವಳಿ ಭಾಗದ ಗೌಡರಿಗೆ ಎರಡು ಕಟ್ಟೆಮನೆಗಳು. ಸುಳ್ಯಪರಿಸರದವರಿಗೆ *ಕೂಜುಗೋಡು ಕಟ್ಟಿಮನೆ'. ಪುತ್ತೂರು ಪರಿಸರದ ತುಳು ಭಾಷಿಕ ಗೌಡರಿಗೆ * ಬಲ್ದಾಡು ಕಟ್ಟೆಮನೆ”.ಗೌಡರ ಬಳಿ ಪದ್ದತಿ.ಗೌಡರು. ಅನುಸರಿಸಿಕೊಂಡು ಬರುತ್ತಿರುವ ಬಳಿ ಎಂಬ ಪದವನ್ನು * ಗೋತ್ರ ಎಂಬರ್ಥದಲ್ಲಿ ಉಪಯೋಗಿಸಿಕೊಂಡುಬರಲಾಗುತ್ತಿದೆ. ವಾಸ್ತವವಾಗಿ ಬಳಿ ಪದ್ಧತಿಯು ಮತ್ತು ಗೋತ್ರ ಪದ್ಧತಿಯು ಬೇರೆ ಬೇರೆ ಆಗಿರುತ್ತದೆ. ಬಳಿಯು ತಂದೆಯಿಂದ ವಸ್ಕಳಿಗೆಇಳಿದು ಬರುತ್ತದೆ. ಒಂದೇ ಕುಟುಂಬ ಬೆಳೆದು ದೊಡ್ಡದಾಗಿ ಬೇರೆ. ಬೇರೆ. ಕಡೆ. ನೆಲೆಸಿದಾಗ, ಅವರೆಲ್ಲಾ ರಕ್ತಸಂಬಂಧಿಯಾಗಿರುವುದರಿಂದ, ಆ ಸಂಬಂಧವನ್ನು ಗುರುತಿಸುವುದ್ದಾಕ್ಕಾಗಿ ಒಂದು ಗೋತ್ರವೆಂದು ಕರೆಯುತ್ತಾರೆ. ಒಂದೇ ಬಳಿಯವರಲ್ಲಿಮದುವೆಯಾಗುವುದು ನಿಷಿದ್ವ ಒಂದೇ ಬಳಿಯವರೆಲ್ಲಾ ಸಹೋದರ ಸಹೋದರಿಯರಾಗುವುದರಿಂದ ಮತ್ತು ಅದು ತಂದೆಯಿಂದಮಗನಿಗೆ ಇಳಿದು ಬರುವುದರಿಂದ, ತಂದೆಯ ಬಳಿಯ ಹುಡುಗಿಯನ್ನು ಮದುವೆಯಾಗುವಂತಿಲ್ಲ.ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗೌಡರಲ್ಲಿ ಪುಚಲಿತದಲ್ಲಿರುವ " ಹತ್ತು ಕುಟುಂಬ ಹದಿನೆಂಟು ಗೋತ್ರ' ಎಂಬನುಡಿಗಟ್ಟಿನ ಆಧಾರದ ಮೇಲೆ 18 ಬಳಿಗಳಿವೆಯೆಂದು ಕೆಲವರು ಹೇಳುತ್ತಾರೆ ( ಶ್ರೀ ಯಮ್‌.ಗಂಗಾಧರ]. ಆದರೆ ವಾಸ್ತವವಾಗಿ ಈಗಗೌಡರಲ್ಲಿ ಕೇವಲ 12 ಬಳಿಗಳು ಮಾತ್ರ ಆಸ್ತಿತದಲ್ಲಿವೆಯೆಂದು ಶ್ರೀ ಪುರುಷೋತ್ತಮ ಬಿಳಿಮಲೆಯವರು ತಮ್ಮ ಅಧ್ಯಯನದ ಮೂಲಕವಿವರಿಸಿದ್ದಾರೆ. ಅವು ಕೆಳಗಿನಂತಿವೆ.1. ನಂದರ ಬಳಿ 2. ಬಂಗಾರ ಬಳಿ 3.ಹೆಮ್ಮನ ಬಳಿ.4. ಮೂಲರ ಬಳಿ. 5. ನಾಯರ ಬಳಿ 6. ಜಾಲ್ಕರ ಬಳಿ7. ಗುಂಡರ ಬಳಿ 8. ಕಬರ್‌ ಬಳಿ 9. ಚಿತ್ತರ ಬಳಿ10, ಗೌಡರ ಬಳಿ 11.ಬಳಸನ್ನ ಬಳಿ 12 ಗೋಳಿ ಬಳಿ

Join our VIP group of Elite Female Podcasters

Lorem ipsum dolor sit amet, consectetur adipiscing elit. Fusce ut elementum elit. Nulla pharetra sem id nisi ornare, eget porta eros vehicula.

Let's see if we should work together.

  • This is a valid reason why we should be working together.

  • This is a valid reason why we should be working together.

  • This is a valid reason why we should be working together.

  • This is a valid reason why we should be working together.

  • This is a valid reason why we should be working together.

  • This is a valid reason why we should be working together.

  • This is a valid reason why we should be working together.

  • This is a valid reason why we should be working together.

Client Testimonials

With❤️from clients

"Jane Doe has given me an amazing amount of knowledge for my podcast business and I now have the clarity and guidance. Thank you for all the help!"

Follow me on Instagram

Copyright © 2021 - 2025. Made with Groove.cm - All rights reserved.